الٓرۚ تِلۡكَ ءَايَٰتُ ٱلۡكِتَٰبِ وَقُرۡءَانٖ مُّبِينٖ
ಅಲಿಫ್ ಲಾಮ್ ರಾ. ಇವು ದೈವಿಕ ಗ್ರಂಥದ ವಚನಗಳು ಮತ್ತು ಸ್ಪಷ್ಟ ಕುರ್ಆನ್ ಆಗಿದೆ.
رُّبَمَا يَوَدُّ ٱلَّذِينَ كَفَرُواْ لَوۡ كَانُواْ مُسۡلِمِينَ
”ನಾವು ಮುಸಲ್ಮಾನರಾಗಿದ್ದರೆ!” ಎಂದು ಕೆಲವೊಮ್ಮೆ ಸತ್ಯನಿಷೇಧಿಗಳು ಹಾರೈಸುವರು.[1]
ذَرۡهُمۡ يَأۡكُلُواْ وَيَتَمَتَّعُواْ وَيُلۡهِهِمُ ٱلۡأَمَلُۖ فَسَوۡفَ يَعۡلَمُونَ
ಅವರನ್ನು ಬಿಟ್ಟುಬಿಡಿ. ಅವರು ತಿನ್ನುತ್ತಲೂ, ಆನಂದಿಸುತ್ತಲೂ, ಹುಸಿ ಭರವಸೆಗಳಲ್ಲಿ ತಲ್ಲೀನರಾಗುತ್ತಲೂ ಇರಲಿ. ಸದ್ಯವೇ ಅವರು ತಿಳಿಯುವರು.
وَمَآ أَهۡلَكۡنَا مِن قَرۡيَةٍ إِلَّا وَلَهَا كِتَابٞ مَّعۡلُومٞ
ನಾವು ಯಾವುದೇ ಊರನ್ನು ಅದಕ್ಕೆ ಒಂದು ನಿಗದಿತ ಅವಧಿಯನ್ನು ನೀಡದೆ ನಾಶ ಮಾಡಿಲ್ಲ.
مَّا تَسۡبِقُ مِنۡ أُمَّةٍ أَجَلَهَا وَمَا يَسۡتَـٔۡخِرُونَ
ಯಾವುದೇ ಜನತೆ ತಮ್ಮ ನಿಗದಿತ ಅವಧಿಯನ್ನು ದಾಟಿಹೋಗುವುದಿಲ್ಲ, ಹಿಂದೆ ಉಳಿಯುವುದೂ ಇಲ್ಲ.
وَقَالُواْ يَٰٓأَيُّهَا ٱلَّذِي نُزِّلَ عَلَيۡهِ ٱلذِّكۡرُ إِنَّكَ لَمَجۡنُونٞ
ಸತ್ಯನಿಷೇಧಿಗಳು ಹೇಳಿದರು: “ಓ ದೇವವಾಣಿ ಅವತೀರ್ಣವಾಗುವವನೇ! ನಿಜಕ್ಕೂ ನೀನೊಬ್ಬ ಮಾನಸಿಕ ಅಸ್ವಸ್ಥ.
لَّوۡمَا تَأۡتِينَا بِٱلۡمَلَٰٓئِكَةِ إِن كُنتَ مِنَ ٱلصَّٰدِقِينَ
ನೀನು ಸತ್ಯವಂತನಾಗಿದ್ದರೆ ನೀನೇಕೆ ನಮ್ಮ ಬಳಿಗೆ ದೇವದೂತರುಗಳನ್ನು ತರುವುದಿಲ್ಲ?”
مَا نُنَزِّلُ ٱلۡمَلَٰٓئِكَةَ إِلَّا بِٱلۡحَقِّ وَمَا كَانُوٓاْ إِذٗا مُّنظَرِينَ
ನಾವು ದೇವದೂತರುಗಳನ್ನು ಸತ್ಯ ಸಮೇತವಾಗಿಯೇ ಇಳಿಸುತ್ತೇವೆ.[1] ಆಗ ಅವರಿಗೆ ಯಾವುದೇ ಕಾಲಾವಕಾಶ ನೀಡಲಾಗಿರುವುದಿಲ್ಲ.
إِنَّا نَحۡنُ نَزَّلۡنَا ٱلذِّكۡرَ وَإِنَّا لَهُۥ لَحَٰفِظُونَ
ಈ ಕುರ್ಆನನ್ನು ಅವತೀರ್ಣಗೊಳಿಸಿದ್ದು ನಾವೇ. ನಾವೇ ಇದನ್ನು ಸಂರಕ್ಷಿಸುತ್ತೇವೆ.
وَلَقَدۡ أَرۡسَلۡنَا مِن قَبۡلِكَ فِي شِيَعِ ٱلۡأَوَّلِينَ
ನಿಮಗಿಂತ ಮೊದಲು ನಾವು ಹಿಂದಿನ ಕಾಲದ ಜನರ ಅನೇಕ ಪಂಗಡಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೆವು.
وَمَا يَأۡتِيهِم مِّن رَّسُولٍ إِلَّا كَانُواْ بِهِۦ يَسۡتَهۡزِءُونَ
ಯಾವುದೇ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲಾ ಅವರು ತಮಾಷೆ ಮಾಡಿ ನಗುತ್ತಿದ್ದರು.
كَذَٰلِكَ نَسۡلُكُهُۥ فِي قُلُوبِ ٱلۡمُجۡرِمِينَ
ಅಪರಾಧಿಗಳ ಹೃದಯಗಳಲ್ಲಿ ನಾವು ಈ ರೀತಿ ಅದನ್ನು (ತಮಾಷೆ ಮಾಡುವುದನ್ನು) ತೂರಿಸಿ ಬಿಡುತ್ತೇವೆ.
لَا يُؤۡمِنُونَ بِهِۦ وَقَدۡ خَلَتۡ سُنَّةُ ٱلۡأَوَّلِينَ
ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ. ಹಿಂದಿನ ಕಾಲದ ಜನರ ಮೇಲಿನ ಶಿಕ್ಷಾಕ್ರಮವು ಈಗಾಗಲೇ ಜರುಗಿ ಬಿಟ್ಟಿದೆ.
وَلَوۡ فَتَحۡنَا عَلَيۡهِم بَابٗا مِّنَ ٱلسَّمَآءِ فَظَلُّواْ فِيهِ يَعۡرُجُونَ
ನಾವು ಅವರ ಮೇಲೆ ಆಕಾಶದ ದ್ವಾರವನ್ನು ತೆರೆದುಕೊಟ್ಟು ಅವರು ಅದಕ್ಕೆ ಏರಿಹೋದರೂ ಸಹ,
لَقَالُوٓاْ إِنَّمَا سُكِّرَتۡ أَبۡصَٰرُنَا بَلۡ نَحۡنُ قَوۡمٞ مَّسۡحُورُونَ
ಅವರು ಹೇಳುವರು: “ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ. ಅಲ್ಲ, ನಮಗೆ ಮಾಟ ಮಾಡಲಾಗಿದೆ.”[1]
وَلَقَدۡ جَعَلۡنَا فِي ٱلسَّمَآءِ بُرُوجٗا وَزَيَّنَّٰهَا لِلنَّٰظِرِينَ
ನಾವು ಆಕಾಶದಲ್ಲಿ ನಕ್ಷತ್ರ ಪುಂಜಗಳನ್ನು ಮಾಡಿದ್ದೇವೆ ಮತ್ತು ನೋಡುಗರಿಗಾಗಿ ಅವುಗಳನ್ನು ಅಲಂಕರಿಸಿದ್ದೇವೆ.
وَحَفِظۡنَٰهَا مِن كُلِّ شَيۡطَٰنٖ رَّجِيمٍ
ಮತ್ತು ಅದನ್ನು (ಆಕಾಶವನ್ನು) ಎಲ್ಲಾ ಬಹಿಷ್ಕೃತ ಶೈತಾನರಿಂದ ಸಂರಕ್ಷಿಸಿದ್ದೇವೆ.
إِلَّا مَنِ ٱسۡتَرَقَ ٱلسَّمۡعَ فَأَتۡبَعَهُۥ شِهَابٞ مُّبِينٞ
ಯಾರಾದರೂ ಕದ್ದಾಲಿಸಲು ಪ್ರಯತ್ನಿಸಿದರೆ, ಅಗ್ನಿಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ.
وَٱلۡأَرۡضَ مَدَدۡنَٰهَا وَأَلۡقَيۡنَا فِيهَا رَوَٰسِيَ وَأَنۢبَتۡنَا فِيهَا مِن كُلِّ شَيۡءٖ مَّوۡزُونٖ
ನಾವು ಭೂಮಿಯನ್ನು ವಿಸ್ತರಿಸಿದೆವು ಮತ್ತು ಅದರಲ್ಲಿ ಪರ್ವತಗಳನ್ನು ಹಾಕಿದೆವು. ಅದರಲ್ಲಿ ನಾವು ಎಲ್ಲವನ್ನೂ ಒಂದು ನಿಗದಿತ ಪ್ರಮಾಣದಲ್ಲಿ ಬೆಳೆಸಿದೆವು.
وَجَعَلۡنَا لَكُمۡ فِيهَا مَعَٰيِشَ وَمَن لَّسۡتُمۡ لَهُۥ بِرَٰزِقِينَ
ಅದರಲ್ಲಿ ನಾವು ನಿಮಗೆ ಮತ್ತು ನೀವು ಆಹಾರ ನೀಡದವರಿಗೆ[1] ಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು.
وَإِن مِّن شَيۡءٍ إِلَّا عِندَنَا خَزَآئِنُهُۥ وَمَا نُنَزِّلُهُۥٓ إِلَّا بِقَدَرٖ مَّعۡلُومٖ
ಯಾವುದೇ ವಸ್ತುವಾದರೂ ಅದರ ಬೊಕ್ಕಸಗಳು ನಮ್ಮ ಬಳಿಯಲ್ಲೇ ಇವೆ. ನಾವು ಪ್ರತಿಯೊಂದು ವಸ್ತುವನ್ನೂ ಅದರ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿಯೇ ಇಳಿಸುತ್ತೇವೆ.
وَأَرۡسَلۡنَا ٱلرِّيَٰحَ لَوَٰقِحَ فَأَنزَلۡنَا مِنَ ٱلسَّمَآءِ مَآءٗ فَأَسۡقَيۡنَٰكُمُوهُ وَمَآ أَنتُمۡ لَهُۥ بِخَٰزِنِينَ
ನಾವು ಫಲವತ್ತಾಗಿಸುವ ಗಾಳಿಯನ್ನು ಕಳುಹಿಸುತ್ತೇವೆ. ನಂತರ ಆಕಾಶದಿಂದ ಮಳೆಯನ್ನು ಸುರಿಸಿ, ಅದನ್ನು ನಿಮಗೆ ಕುಡಿಯಲು ನೀಡುತ್ತೇವೆ. ನೀವು ಅದನ್ನು ಸಂಗ್ರಹಿಸಿಡುವವರಲ್ಲ.
وَإِنَّا لَنَحۡنُ نُحۡيِۦ وَنُمِيتُ وَنَحۡنُ ٱلۡوَٰرِثُونَ
ನಿಶ್ಚಯವಾಗಿಯೂ ನಾವೇ ಜೀವನ ಮತ್ತು ಮರಣವನ್ನು ನೀಡುವವರು. ನಾವೇ (ಎಲ್ಲಾ ವಸ್ತುಗಳ) ಉತ್ತರಾಧಿಕಾರಿಗಳು.
وَلَقَدۡ عَلِمۡنَا ٱلۡمُسۡتَقۡدِمِينَ مِنكُمۡ وَلَقَدۡ عَلِمۡنَا ٱلۡمُسۡتَـٔۡخِرِينَ
ನಿಮ್ಮಲ್ಲಿ ಇದಕ್ಕೆ ಮೊದಲು ತೀರಿ ಹೋದವರು ಯಾರೆಂದು ನಮಗೆ ತಿಳಿದಿದೆ. ಮುಂದೆ ಬರಲಿರುವವರು ಯಾರೆಂದೂ ನಮಗೆ ತಿಳಿದಿದೆ.
وَإِنَّ رَبَّكَ هُوَ يَحۡشُرُهُمۡۚ إِنَّهُۥ حَكِيمٌ عَلِيمٞ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರನ್ನು ಒಟ್ಟು ಸೇರಿಸುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.
وَلَقَدۡ خَلَقۡنَا ٱلۡإِنسَٰنَ مِن صَلۡصَٰلٖ مِّنۡ حَمَإٖ مَّسۡنُونٖ
ನಾವು ಮನುಷ್ಯನನ್ನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದೆವು.
وَٱلۡجَآنَّ خَلَقۡنَٰهُ مِن قَبۡلُ مِن نَّارِ ٱلسَّمُومِ
ನಾವು ಜಿನ್ನ್ಗಳನ್ನು ಇದಕ್ಕಿಂತ ಮೊದಲು ತೀಕ್ಷ್ಣ ತಾಪವಿರುವ ಬೆಂಕಿಯಿಂದ ಸೃಷ್ಟಿಸಿದೆವು.
وَإِذۡ قَالَ رَبُّكَ لِلۡمَلَٰٓئِكَةِ إِنِّي خَٰلِقُۢ بَشَرٗا مِّن صَلۡصَٰلٖ مِّنۡ حَمَإٖ مَّسۡنُونٖ
ತಮ್ಮ ಪರಿಪಾಲಕನು (ಅಲ್ಲಾಹು) ದೇವದೂತರುಗಳೊಡನೆ ಹೇಳಿದ ಸಂದರ್ಭ: “ನಾನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸುತ್ತೇನೆ.
فَإِذَا سَوَّيۡتُهُۥ وَنَفَخۡتُ فِيهِ مِن رُّوحِي فَقَعُواْ لَهُۥ سَٰجِدِينَ
ನಾನು ಅವನಿಗೆ ಪೂರ್ಣ ರೂಪವನ್ನು ನೀಡಿ ಅವನಿಗೆ ನನ್ನ ಆತ್ಮವನ್ನು ಊದಿದರೆ, ನೀವೆಲ್ಲರೂ ಅವನಿಗೆ ಸಾಷ್ಟಾಂಗ ಮಾಡುತ್ತಾ ಬೀಳಿರಿ.”
فَسَجَدَ ٱلۡمَلَٰٓئِكَةُ كُلُّهُمۡ أَجۡمَعُونَ
ಆಗ ದೇವದೂತರುಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗ ಮಾಡಿದರು.
إِلَّآ إِبۡلِيسَ أَبَىٰٓ أَن يَكُونَ مَعَ ٱلسَّٰجِدِينَ
ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರೊಡನೆ ಸೇರಲು ನಿರಾಕರಿಸಿದನು.
قَالَ يَٰٓإِبۡلِيسُ مَا لَكَ أَلَّا تَكُونَ مَعَ ٱلسَّٰجِدِينَ
ಅಲ್ಲಾಹು ಕೇಳಿದನು: “ಓ ಇಬ್ಲೀಸ್! ನೀನು ಸಾಷ್ಟಾಂಗ ಮಾಡುವವರೊಡನೆ ಸೇರದಿರಲು ಕಾರಣವೇನು?”
قَالَ لَمۡ أَكُن لِّأَسۡجُدَ لِبَشَرٍ خَلَقۡتَهُۥ مِن صَلۡصَٰلٖ مِّنۡ حَمَإٖ مَّسۡنُونٖ
ಅವನು ಹೇಳಿದನು: “ನೀನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗ ಮಾಡಬೇಕಾದವನಲ್ಲ.”
قَالَ فَٱخۡرُجۡ مِنۡهَا فَإِنَّكَ رَجِيمٞ
ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಟುಹೋಗು. ನಿಜಕ್ಕೂ ನೀನು ಬಹಿಷ್ಕೃತನಾಗಿರುವೆ.
وَإِنَّ عَلَيۡكَ ٱللَّعۡنَةَ إِلَىٰ يَوۡمِ ٱلدِّينِ
ಪ್ರತಿಫಲದ ದಿನದ ತನಕ ನಿನ್ನ ಮೇಲೆ ಶಾಪವಿದೆ.”
قَالَ رَبِّ فَأَنظِرۡنِيٓ إِلَىٰ يَوۡمِ يُبۡعَثُونَ
ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ಅವರನ್ನು ಜೀವಂತ ಎಬ್ಬಿಸಲಾಗುವ ದಿನದ ತನಕ ನನಗೆ ಕಾಲಾವಕಾಶ ನೀಡು.”
قَالَ فَإِنَّكَ مِنَ ٱلۡمُنظَرِينَ
ಅಲ್ಲಾಹು ಹೇಳಿದನು: “ಸರಿ. ನಿನ್ನನ್ನು ಕಾಲಾವಕಾಶ ನೀಡಲಾದವರಲ್ಲಿ ಸೇರಿಸಿದ್ದೇನೆ.
إِلَىٰ يَوۡمِ ٱلۡوَقۡتِ ٱلۡمَعۡلُومِ
ಆ ನಿಗದಿತ ಸಮಯದ ದಿನದ ತನಕ.”
قَالَ رَبِّ بِمَآ أَغۡوَيۡتَنِي لَأُزَيِّنَنَّ لَهُمۡ فِي ٱلۡأَرۡضِ وَلَأُغۡوِيَنَّهُمۡ أَجۡمَعِينَ
ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ನೀನು ನನ್ನನ್ನು ದಾರಿತಪ್ಪಿಸಿದ ಕಾರಣ, ಭೂಮಿಯಲ್ಲಿ ನಾನು ಅವರೆಲ್ಲರಿಗೂ ಪಾಪಗಳನ್ನು ಅಂದವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸುವೆನು.
إِلَّا عِبَادَكَ مِنۡهُمُ ٱلۡمُخۡلَصِينَ
ಅವರಲ್ಲಿರುವ ನಿನ್ನ ನಿಷ್ಕಳಂಕ ದಾಸರ ಹೊರತು.”
قَالَ هَٰذَا صِرَٰطٌ عَلَيَّ مُسۡتَقِيمٌ
ಅಲ್ಲಾಹು ಹೇಳಿದನು: “ಇದು ನನ್ನ ಬಳಿಗೆ ತಲುಪುವ ನೇರ ಮಾರ್ಗವಾಗಿದೆ.
إِنَّ عِبَادِي لَيۡسَ لَكَ عَلَيۡهِمۡ سُلۡطَٰنٌ إِلَّا مَنِ ٱتَّبَعَكَ مِنَ ٱلۡغَاوِينَ
ನಿಶ್ಚಯವಾಗಿಯೂ, ನನ್ನ ದಾಸರ ಮೇಲೆ ನಿನಗೆ ಯಾವುದೇ ಅಧಿಕಾರವಿಲ್ಲ. ಅವರಲ್ಲಿ ನಿನ್ನನ್ನು ಹಿಂಬಾಲಿಸಿದ ದುರ್ಮಾರ್ಗಿಗಳ ಹೊರತು.
وَإِنَّ جَهَنَّمَ لَمَوۡعِدُهُمۡ أَجۡمَعِينَ
ನಿಶ್ಚಯವಾಗಿಯೂ, ನರಕಾಗ್ನಿಯು ಅವರೆಲ್ಲರಿಗೂ ವಾಗ್ದಾನ ಮಾಡಲಾದ ಸ್ಥಳವಾಗಿದೆ.
لَهَا سَبۡعَةُ أَبۡوَٰبٖ لِّكُلِّ بَابٖ مِّنۡهُمۡ جُزۡءٞ مَّقۡسُومٌ
ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೂ ಅವರಲ್ಲಿರುವ ಒಂದು ವಿಭಾಗವನ್ನು ವಿಂಗಡಿಸಿಡಲಾಗಿದೆ.
إِنَّ ٱلۡمُتَّقِينَ فِي جَنَّٰتٖ وَعُيُونٍ
ನಿಶ್ಚಯವಾಗಿಯೂ, ದೇವಭಯವುಳ್ಳವರು ಉದ್ಯಾನಗಳಲ್ಲಿ ಮತ್ತು ಚಿಲುಮೆಗಳಲ್ಲಿರುತ್ತಾರೆ.
ٱدۡخُلُوهَا بِسَلَٰمٍ ءَامِنِينَ
(ಅವರೊಡನೆ ಹೇಳಲಾಗುವುದು): “ನಿರ್ಭಯ ಮತ್ತು ಶಾಂತಿಯಿಂದ ಅದರೊಳಗೆ ಪ್ರವೇಶಿಸಿರಿ.”
وَنَزَعۡنَا مَا فِي صُدُورِهِم مِّنۡ غِلٍّ إِخۡوَٰنًا عَلَىٰ سُرُرٖ مُّتَقَٰبِلِينَ
ಅವರ ಹೃದಯಗಳಲ್ಲಿ ಯಾವುದೇ ರೀತಿಯ ದ್ವೇಷವಿದ್ದರೆ ನಾವು ಅದನ್ನು ತೊಲಗಿಸುವೆವು. ಅವರು ಸಹೋದರರಂತೆ ಪರಸ್ಪರ ಮುಖಾಮುಖಿಯಾಗಿ ಸಿಂಹಾಸನಗಳಲ್ಲಿ ಕುಳಿತಿರುವರು.
لَا يَمَسُّهُمۡ فِيهَا نَصَبٞ وَمَا هُم مِّنۡهَا بِمُخۡرَجِينَ
ಅಲ್ಲಿ ಅವರಿಗೆ ಯಾವುದೇ ರೀತಿಯ ಆಯಾಸ ಉಂಟಾಗುವುದಿಲ್ಲ. ಅವರನ್ನು ಅಲ್ಲಿಂದ ಹೊರದಬ್ಬಲಾಗುವುದೂ ಇಲ್ಲ.
۞ نَبِّئۡ عِبَادِيٓ أَنِّيٓ أَنَا ٱلۡغَفُورُ ٱلرَّحِيمُ
ನನ್ನ ದಾಸರಿಗೆ, ನಾನು ಅತ್ಯಂತ ಕ್ಷಮಿಸುವವನು ಮತ್ತು ಅತ್ಯಧಿಕ ದಯೆ ತೋರುವವನೆಂದು ತಿಳಿಸಿ.
وَأَنَّ عَذَابِي هُوَ ٱلۡعَذَابُ ٱلۡأَلِيمُ
ನನ್ನ ಶಿಕ್ಷೆಯು ಅತ್ಯಧಿಕ ನೋವಿನಿಂದ ಕೂಡಿದ ಶಿಕ್ಷೆಯಾಗಿದೆಯೆಂದೂ ತಿಳಿಸಿ.
وَنَبِّئۡهُمۡ عَن ضَيۡفِ إِبۡرَٰهِيمَ
ಇಬ್ರಾಹೀಮರ ಅತಿಥಿಗಳ ಬಗ್ಗೆ ಅವರಿಗೆ ತಿಳಿಸಿ.
إِذۡ دَخَلُواْ عَلَيۡهِ فَقَالُواْ سَلَٰمٗا قَالَ إِنَّا مِنكُمۡ وَجِلُونَ
ಅವರು ಇಬ್ರಾಹೀಮರ ಬಳಿಗೆ ಬಂದು “ಸಲಾಮ್” ಎಂದು ಹೇಳಿದ ಸಂದರ್ಭ. ಇಬ್ರಾಹೀಮ್ ಹೇಳಿದರು: “ನಿಜಕ್ಕೂ ನಮಗೆ ನಿಮ್ಮ ಬಗ್ಗೆ ಭಯವಾಗುತ್ತಿದೆ.”
قَالُواْ لَا تَوۡجَلۡ إِنَّا نُبَشِّرُكَ بِغُلَٰمٍ عَلِيمٖ
ಅವರು ಉತ್ತರಿಸಿದರು: “ಭಯಪಡಬೇಡಿ! ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಜನನದ ಶುಭ ಸುದ್ದಿಯನ್ನು ತಿಳಿಸುತ್ತೇವೆ.”
قَالَ أَبَشَّرۡتُمُونِي عَلَىٰٓ أَن مَّسَّنِيَ ٱلۡكِبَرُ فَبِمَ تُبَشِّرُونَ
ಇಬ್ರಾಹೀಮ್ ಕೇಳಿದರು: “ನಾನು ಇಳಿ ವಯಸ್ಸನ್ನು ತಲುಪಿದ ಬಳಿಕ ನೀವು ನನಗೆ ಶುಭ ಸುದ್ದಿ ತಿಳಿಸುತ್ತಿದ್ದೀರಾ? ನೀವು ಎಂತಹ ಶುಭ ಸುದ್ದಿ ತಿಳಿಸುತ್ತೀರಿ?”
قَالُواْ بَشَّرۡنَٰكَ بِٱلۡحَقِّ فَلَا تَكُن مِّنَ ٱلۡقَٰنِطِينَ
ಅವರು ಹೇಳಿದರು: “ನಾವು ನಿಮಗೆ ಸತ್ಯವಾದ ಒಂದು ಶುಭ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಆದ್ದರಿಂದ ನೀವು ನಿರಾಶರಾದವರಲ್ಲಿ ಸೇರಬೇಡಿ.”
قَالَ وَمَن يَقۡنَطُ مِن رَّحۡمَةِ رَبِّهِۦٓ إِلَّا ٱلضَّآلُّونَ
ಇಬ್ರಾಹೀಮ್ ಹೇಳಿದರು: “ತನ್ನ ಪರಿಪಾಲಕನ (ಅಲ್ಲಾಹನ) ಕರುಣೆಯ ಬಗ್ಗೆ ದಾರಿತಪ್ಪಿದವರ ಹೊರತು ಇನ್ನಾರು ನಿರಾಶರಾಗುತ್ತಾರೆ?”
قَالَ فَمَا خَطۡبُكُمۡ أَيُّهَا ٱلۡمُرۡسَلُونَ
ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?”
قَالُوٓاْ إِنَّآ أُرۡسِلۡنَآ إِلَىٰ قَوۡمٖ مُّجۡرِمِينَ
ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ.
إِلَّآ ءَالَ لُوطٍ إِنَّا لَمُنَجُّوهُمۡ أَجۡمَعِينَ
ಆದರೆ ಲೂತ್ರ ಕುಟುಂಬವು ಇದರಿಂದ ಹೊರತಾಗಿದೆ. ನಾವು ಅವರೆಲ್ಲರನ್ನೂ ಖಂಡಿತ ರಕ್ಷಿಸುವೆವು.
إِلَّا ٱمۡرَأَتَهُۥ قَدَّرۡنَآ إِنَّهَا لَمِنَ ٱلۡغَٰبِرِينَ
ಆದರೆ ಅವರ ಹೆಂಡತಿಯ ಹೊರತು.” ನಾವು ಅವಳನ್ನು ಬಾಕಿಯಾಗುವವರಲ್ಲಿ (ಶಿಕ್ಷೆಗೆ ಗುರಿಯಾಗುವವರಲ್ಲಿ) ನಿರ್ಣಯಿಸಿದ್ದೇವೆ.
فَلَمَّا جَآءَ ءَالَ لُوطٍ ٱلۡمُرۡسَلُونَ
ನಂತರ ಆ ದೂತರು ಲೂತರ ಕುಟುಂಬದವರ ಬಳಿಗೆ ಬಂದಾಗ,
قَالَ إِنَّكُمۡ قَوۡمٞ مُّنكَرُونَ
ಲೂತ್ ಹೇಳಿದರು: “ನಿಜಕ್ಕೂ ನೀವು ಅಪರಿಚಿತ ಜನರಂತೆ ಕಾಣುತ್ತೀರಿ.”
قَالُواْ بَلۡ جِئۡنَٰكَ بِمَا كَانُواْ فِيهِ يَمۡتَرُونَ
ಅವರು ಉತ್ತರಿಸಿದರು: “ಅಲ್ಲ, ವಾಸ್ತವವಾಗಿ ಈ ಜನರು ಯಾವುದರ ಬಗ್ಗೆ ಸಂಶಯಪಡುತ್ತಿದ್ದಾರೋ ಅದನ್ನೇ ನಾವು ತಂದಿದ್ದೇವೆ.
وَأَتَيۡنَٰكَ بِٱلۡحَقِّ وَإِنَّا لَصَٰدِقُونَ
ನಾವು ನಿಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೇವೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ.
فَأَسۡرِ بِأَهۡلِكَ بِقِطۡعٖ مِّنَ ٱلَّيۡلِ وَٱتَّبِعۡ أَدۡبَٰرَهُمۡ وَلَا يَلۡتَفِتۡ مِنكُمۡ أَحَدٞ وَٱمۡضُواْ حَيۡثُ تُؤۡمَرُونَ
ಆದ್ದರಿಂದ ರಾತ್ರಿಯ ಒಂದು ಭಾಗದಲ್ಲಿ ನೀವು ತಮ್ಮ ಕುಟುಂಬ ಸಮೇತ ಇಲ್ಲಿಂದ ಹೊರಡಿ. ನೀವು ಅವರನ್ನು (ಕುಟುಂಬವನ್ನು) ಹಿಂದಿನಿಂದ ಹಿಂಬಾಲಿಸಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡದಿರಲಿ. ನಿಮಗೆ ಆದೇಶಿಸಲಾಗುವ ಕಡೆಗೆ ಸಾಗಿರಿ.”
وَقَضَيۡنَآ إِلَيۡهِ ذَٰلِكَ ٱلۡأَمۡرَ أَنَّ دَابِرَ هَٰٓؤُلَآءِ مَقۡطُوعٞ مُّصۡبِحِينَ
ನಾವು ಲೂತರಿಗೆ ಆ ವಿಷಯದ ತೀರ್ಮಾನವನ್ನು ತಿಳಿಸಿದೆವು—ಅದೇನೆಂದರೆ, ಬೆಳಗಾಗುತ್ತಿದ್ದಂತೆ ಇವರ ಬುಡವನ್ನೇ ಕತ್ತರಿಸಿ ಬಿಡಲಾಗುವುದೆಂದು.
وَجَآءَ أَهۡلُ ٱلۡمَدِينَةِ يَسۡتَبۡشِرُونَ
ನಗರ ವಾಸಿಗಳು ಕೇಕೆ ಹಾಕುತ್ತಾ ಬಂದರು.
قَالَ إِنَّ هَٰٓؤُلَآءِ ضَيۡفِي فَلَا تَفۡضَحُونِ
ಲೂತ್ ಹೇಳಿದರು: “ಇವರು ನನ್ನ ಅತಿಥಿಗಳು! ದಯವಿಟ್ಟು ನನಗೆ ಅವಮಾನ ಮಾಡಬೇಡಿ.
وَٱتَّقُواْ ٱللَّهَ وَلَا تُخۡزُونِ
ಅಲ್ಲಾಹನನ್ನು ಭಯಪಡಿರಿ. ನನ್ನನ್ನು ತಮಾಷೆ ಮಾಡಬೇಡಿ.”
قَالُوٓاْ أَوَلَمۡ نَنۡهَكَ عَنِ ٱلۡعَٰلَمِينَ
ಅವರು ಹೇಳಿದರು: “ಜಗತ್ತಿನಲ್ಲಿರುವವರ ವಿಷಯದಲ್ಲಿ (ಹಸ್ತಕ್ಷೇಪ ಮಾಡಬಾರದೆಂದು) ನಾವು ನಿನ್ನನ್ನು ತಡೆದಿಲ್ಲವೇ?”
قَالَ هَٰٓؤُلَآءِ بَنَاتِيٓ إِن كُنتُمۡ فَٰعِلِينَ
ಲೂತ್ ಹೇಳಿದರು: “ನಿಮಗೆ ಅದನ್ನು ಮಾಡಲೇಬೇಕೆಂದಿದ್ದರೆ ಇಲ್ಲಿ ನನ್ನ ಹೆಣ್ಣುಮಕ್ಕಳಿದ್ದಾರೆ.”
لَعَمۡرُكَ إِنَّهُمۡ لَفِي سَكۡرَتِهِمۡ يَعۡمَهُونَ
(ಪ್ರವಾದಿಯವರೇ) ನಿಮ್ಮ ಆಯುಷ್ಯದ ಮೇಲಾಣೆ! ಅವರು ಕಾಮೋನ್ಮಾದದಿಂದ ಅಂಧರಾಗಿ ಅಲೆಯುತ್ತಿದ್ದರು.
فَأَخَذَتۡهُمُ ٱلصَّيۡحَةُ مُشۡرِقِينَ
ಸೂರ್ಯೋದಯವಾಗುತ್ತಿದ್ದಂತೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು.
فَجَعَلۡنَا عَٰلِيَهَا سَافِلَهَا وَأَمۡطَرۡنَا عَلَيۡهِمۡ حِجَارَةٗ مِّن سِجِّيلٍ
ನಂತರ ನಾವು ಆ ಊರನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಕಲ್ಲುಗಳ ಮಳೆಯನ್ನು ಸುರಿಸಿದೆವು.
إِنَّ فِي ذَٰلِكَ لَأٓيَٰتٖ لِّلۡمُتَوَسِّمِينَ
ನಿಶ್ಚಯವಾಗಿಯೂ ಅಂತರ್ದೃಷ್ಟಿಯುಳ್ಳವರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
وَإِنَّهَا لَبِسَبِيلٖ مُّقِيمٍ
ನಿಶ್ಚಯವಾಗಿಯೂ ಆ ಊರು ಸಮಾನಾಂತರದಲ್ಲಿ ಚಲಿಸುವ (ಚಿರಪರಿಚಿತ) ರಸ್ತೆಯಲ್ಲಿದೆ.
إِنَّ فِي ذَٰلِكَ لَأٓيَةٗ لِّلۡمُؤۡمِنِينَ
ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಿಗೆ ದೃಷ್ಟಾಂತವಿದೆ.
وَإِن كَانَ أَصۡحَٰبُ ٱلۡأَيۡكَةِ لَظَٰلِمِينَ
ಐಕತ್ನ ಜನರು (ಮದ್ಯನ್ ದೇಶದವರು) ಅಕ್ರಮಿಗಳಾಗಿದ್ದರು.
فَٱنتَقَمۡنَا مِنۡهُمۡ وَإِنَّهُمَا لَبِإِمَامٖ مُّبِينٖ
ಆದ್ದರಿಂದ, ನಾವು ಅವರಿಂದ ಪ್ರತೀಕಾರ ಪಡೆದೆವು. ಈ ಎರಡು ಊರುಗಳೂ[1] ಬಯಲು ರಸ್ತೆಯಲ್ಲಿವೆ.
وَلَقَدۡ كَذَّبَ أَصۡحَٰبُ ٱلۡحِجۡرِ ٱلۡمُرۡسَلِينَ
ಹಿಜ್ರ್ ನಿವಾಸಿಗಳು (ಸಮೂದ್ ಗೋತ್ರದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು.
وَءَاتَيۡنَٰهُمۡ ءَايَٰتِنَا فَكَانُواْ عَنۡهَا مُعۡرِضِينَ
ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ನೀಡಿದ್ದೆವು. ಆದರೆ ಅವರು ಅವುಗಳನ್ನು ಲೆಕ್ಕಿಸದೆ ವಿಮುಖರಾದರು.
وَكَانُواْ يَنۡحِتُونَ مِنَ ٱلۡجِبَالِ بُيُوتًا ءَامِنِينَ
ಅವರು ನಿರ್ಭೀತವಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತಿದ್ದರು.
فَأَخَذَتۡهُمُ ٱلصَّيۡحَةُ مُصۡبِحِينَ
ಆಗ ಬೆಳಗ್ಗಿನ ವೇಳೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು.
فَمَآ أَغۡنَىٰ عَنۡهُم مَّا كَانُواْ يَكۡسِبُونَ
ಅವರ ಯಾವುದೇ ಕರ್ಮಗಳು ಅವರಿಗೆ ಉಪಕಾರ ಮಾಡಲಿಲ್ಲ.
وَمَا خَلَقۡنَا ٱلسَّمَٰوَٰتِ وَٱلۡأَرۡضَ وَمَا بَيۡنَهُمَآ إِلَّا بِٱلۡحَقِّۗ وَإِنَّ ٱلسَّاعَةَ لَأٓتِيَةٞۖ فَٱصۡفَحِ ٱلصَّفۡحَ ٱلۡجَمِيلَ
ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತ್ಯಸಮಯವು ಖಂಡಿತ ಬಂದೇ ಬರುತ್ತದೆ. ಆದ್ದರಿಂದ ನೀವು ಅತಿಸುಂದರವಾದ ರೀತಿಯಲ್ಲಿ ಕ್ಷಮಿಸಿಬಿಡಿ.
إِنَّ رَبَّكَ هُوَ ٱلۡخَلَّٰقُ ٱلۡعَلِيمُ
ನಿಶ್ಚಯವಾಗಿಯೂ, ನಿಮ್ಮ ಪರಿಪಾಲಕನು (ಅಲ್ಲಾಹು) ಸೃಷ್ಟಿಕರ್ತನು ಮತ್ತು ಸರ್ವಜ್ಞನಾಗಿದ್ದಾನೆ.
وَلَقَدۡ ءَاتَيۡنَٰكَ سَبۡعٗا مِّنَ ٱلۡمَثَانِي وَٱلۡقُرۡءَانَ ٱلۡعَظِيمَ
ನಾವು ನಿಮಗೆ ಪುನರಾವರ್ತಿಸಿ ಪಠಿಸಲಾಗುವ ಏಳು ವಚನಗಳನ್ನು[1] ಮತ್ತು ಶ್ರೇಷ್ಠ ಕುರ್ಆನನ್ನು ನೀಡಿದ್ದೇವೆ.
لَا تَمُدَّنَّ عَيۡنَيۡكَ إِلَىٰ مَا مَتَّعۡنَا بِهِۦٓ أَزۡوَٰجٗا مِّنۡهُمۡ وَلَا تَحۡزَنۡ عَلَيۡهِمۡ وَٱخۡفِضۡ جَنَاحَكَ لِلۡمُؤۡمِنِينَ
ಅವರಲ್ಲಿರುವ ಪಂಗಡಗಳಿಗೆ ನಾವು ಏನೇನು ಸವಲತ್ತುಗಳನ್ನು ಒದಗಿಸಿದ್ದೇವೆಯೋ ಅದರ ಕಡೆಗೆ ನೀವು ನಿಮ್ಮ ದೃಷ್ಟಿಯನ್ನು ಹರಿಸಬೇಡಿ. ಅವರ ವಿಷಯದಲ್ಲಿ ಬೇಸರಪಡಬೇಡಿ. ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಗಳನ್ನು ತಗ್ಗಿಸಿಕೊಡಿ.
وَقُلۡ إِنِّيٓ أَنَا ٱلنَّذِيرُ ٱلۡمُبِينُ
ಹೇಳಿರಿ: “ನಿಶ್ಚಯವಾಗಿಯೂ ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.”
كَمَآ أَنزَلۡنَا عَلَى ٱلۡمُقۡتَسِمِينَ
ವಿಂಗಡನೆ ಮಾಡಿದವರ ಮೇಲೆ ನಾವು (ಶಿಕ್ಷೆಯನ್ನು) ಇಳಿಸಿದಂತೆ,
ٱلَّذِينَ جَعَلُواْ ٱلۡقُرۡءَانَ عِضِينَ
ಅಂದರೆ ಕುರ್ಆನನ್ನು ವಿವಿಧ ಭಾಗಗಳನ್ನಾಗಿ ಮಾಡಿದವರ ಮೇಲೆ.[1]
فَوَرَبِّكَ لَنَسۡـَٔلَنَّهُمۡ أَجۡمَعِينَ
ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನಾವು ಅವರಲ್ಲಿ ಎಲ್ಲರನ್ನೂ ಖಂಡಿತ ವಿಚಾರಣೆ ಮಾಡುವೆವು.
عَمَّا كَانُواْ يَعۡمَلُونَ
ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ.
فَٱصۡدَعۡ بِمَا تُؤۡمَرُ وَأَعۡرِضۡ عَنِ ٱلۡمُشۡرِكِينَ
ಆದ್ದರಿಂದ ನಿಮಗೆ ಆಜ್ಞಾಪಿಸಲಾಗುವುದನ್ನು ಬಹಿರಂಗವಾಗಿ ಘೋಷಿಸಿರಿ ಮತ್ತು ಬಹುದೇವಾರಾಧಕರಿಂದ ವಿಮುಖರಾಗಿರಿ.
إِنَّا كَفَيۡنَٰكَ ٱلۡمُسۡتَهۡزِءِينَ
ನಿಮ್ಮನ್ನು ತಮಾಷೆ ಮಾಡುವವರನ್ನು ನೋಡಿಕೊಳ್ಳಲು ನಿಮಗೆ ನಾವು ಸಾಕು.
ٱلَّذِينَ يَجۡعَلُونَ مَعَ ٱللَّهِ إِلَٰهًا ءَاخَرَۚ فَسَوۡفَ يَعۡلَمُونَ
ಅವರು ಯಾರೆಂದರೆ, ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಸ್ಥಾಪಿಸುವವರು. ಅವರು ಸದ್ಯವೇ ತಿಳಿದುಕೊಳ್ಳುವರು.
وَلَقَدۡ نَعۡلَمُ أَنَّكَ يَضِيقُ صَدۡرُكَ بِمَا يَقُولُونَ
(ಪ್ರವಾದಿಯವರೇ) ಅವರು ಹೇಳುವ ಮಾತುಗಳಿಂದ ನಿಮ್ಮ ಹೃದಯವು ಇಕ್ಕಟ್ಟು ಅನುಭವಿಸುತ್ತಿದೆಯೆಂದು ನಮಗೆ ತಿಳಿದಿದೆ.
فَسَبِّحۡ بِحَمۡدِ رَبِّكَ وَكُن مِّنَ ٱلسَّٰجِدِينَ
ಆದ್ದರಿಂದ ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ ಮತ್ತು ಸಾಷ್ಟಾಂಗ ಮಾಡುವವರಲ್ಲಿ ಸೇರಿರಿ.
وَٱعۡبُدۡ رَبَّكَ حَتَّىٰ يَأۡتِيَكَ ٱلۡيَقِينُ
ಮರಣವು ಬರುವ ತನಕ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ.
کۆردی بادینی
English - Rowwad Center
English - Noor Center
English - Hilali and Khan
French - Rashid Maash
French - issued by Noor
Spanish - issued by Noor
Spanish - Isa Garcia
Spanish (Latin) - issued by Noor
Portuguese - Helmi Nasr
German - Frank Bubenheim
Romanian - Islam4ro.com
Dutch - Rowwad Center
Turkish - Rowwad Center
Turkish - Shaaban British
Turkish - Dr. Ali Ozek and others
Azerbaijani - Alikhan Musayev
Macedonian - a group of Macedonian scholars
Albanian - Hasan Nahi
Bosnian - Rowwad Centre
Bosnian - Muhammad Mihanovich
Serbian - Rowwad Center
Croatian - Rowwad Center
Lithuanian - Rowwad Center
Uzbek - Rowwad Center
Uzbek - Alaauddin Mansour
Tajik - Rowwad Center
Kyrgyz - Shamsuddin Hakimov
Indonesian - Sabeq Company
Indonesian - Ministry of Religious Affairs
Indonesian - The Assembly
Filipino (Tagalog) - Rowwad Center
Filipino (Bisayan) - Rowwad Center
Chinese - Muhammad Sulaiman
Chinese - Muhammad Makin
Uyghur - Muhammad Saleh
Japanese - Saeed Sato
Vietnamese - Rowwad Center
Khmer - Rowwad Center
Khmer - Islamic Community Development Association
Persian - Rowwad Center
Kurdish - Muhammad Salih Bamoki
Pashto - Rowwad Center
Urdu - Muhammad Junagarhi
Hindi - Azizul Haq Al-Omari
Telugu - Abdurrahim ibn Muhammad
Gujarati - Rabila Al-Omari
Malayalam - Abdulhamid Haidar Al-Madany & Kunhi Muhammad
Kannada - Hamza Butur
Assamese - Rafiqul Islam Habibur Rahman.
Punjabi - Arif Halim
Tamil - Omar Sharif
Tamil - Abdulhamid Albaqoi
Sinhalese - Rowwad Center
Swahili - Ali Muhsen Al-Berwani
Somali - Abdullah Hasan Yaqoub
Amharic - Africa Academy
Amharic - Muhammad Sadiq
Yoruba - Abu Rahima Mikael
Hausa - Abu Bakr Jomy
Oromo - Gali Ababor
Afri - Mahmoud Abdulqader Hamza
N'ko - Baba Mamadi
Kinyarwanda - Rwanda Muslim Association
Kirundi - Yusuf Gheti
Moore - Rowwad Center
Akan (Asante)- Harun Ismail
Lingala - Mohammed Balangogo